Tuesday, March 4, 2008

ಮೊಲವೂ ಆಮೆಯೂ | Rabbit and Tortoise

ಒಂದು ಕಾಡಿನಲ್ಲಿ ಒಂದು ಮೊಲವೂ ಒಂದು ಆಮೆಯೂ ಇದ್ದವು. ಅವೆರಡೂ ಗೆಳೆಯರು. ಒಂದು ದಿನ ಮೊಲವು ಹೇಳಿತು: "ಇಲ್ಲಿ ನನ್ನಷ್ಟು ಜೋರಾಗಿ ಯಾರೂ ಓಡಲಾರರು". ಅದಕ್ಕೆ ತುಂಬ ಜಂಭ ಇತ್ತು. ಆಮೆಗೆ ಜಂಭ ಇರಲಿಲ್ಲ. ಅದಕ್ಕೆ ತುಂಬಾ ಬೇಸರವಾಯಿತು. ಯಾಕೆಂದರೆ ಅದು ನಿಧಾನವಾಗಿ ನಡೆಯುತ್ತಿತ್ತು. ಆಮೆ ಹೇಳಿತು : "ನಾವು ನಾಳೆ ಪಂದ್ಯ ಮಾಡೋಣ. ಸರಿಯೆ?". ಮೊಲವು ಒಪ್ಪಿತು. ಅದಕ್ಕೆ ಸಂತೋಷವಾಯಿತು. ತಾನು ಹೇಗೆ ಓಡುತ್ತೇನೆ ನಾಳೆ , ಆಮೆ ನೋಡಲಿ ಎಂದು ತನ್ನಷ್ಟಕ್ಕೆ ಅಂದಿತು.

ಮರುದಿನ ಮೊಲ ಮತ್ತು ಆಮೆ ತಯಾರಾದುವು.

ಇನ್ನು ನಾಳೆ ....

Sunday, March 2, 2008

ಸರಳ ಕನ್ನಡ ಪದಗಳು | Simple Kannada words

ಅಗಸ - agasa |washerman, ಮನೆ - mane| House, ಆನೆ - aane | Elephant , ಅವಳು - avaLu | She , ಹುಡುಗಿ - huDugi| Girl
ಮೀಸೆ - mIse | Mustach,ಮರ - mara | Tree , ಈಶ - Isha | God Ishwara,
ಅಂಗಳ - aMgaLa | Yard , ಕೈ - kai | Hand, ಅಂಗಿ - aMgi | shirt,
ಲಂಗ - laMga | skirt , ಬಳೆ - baLe | bangle.

ಶಬ್ದ ಹೇಗಾಯಿತು? | How did a word form?

ಲ್ + ಅ + ಮ್ + ಗ್ + ಅ = ಲಂಗ
l + a + M + g + a = laMga